ರಾಜ್ಯಮಟ್ಟದ ವಿಚಾರಗೋಷ್ಠಿ – ‘ಸಂಸ್ಕೃತ ಭಾಷೆ-ಸಾಹಿತ್ಯಗಳಿಗೆ ಕರ್ನಾಟಕದ ರಾಜಮನೆತನಗಳ ಕೊಡುಗೆ’

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಶ್ರೀ ಜಯರಾಮ ಸೇವಾ ಮಂಡಲಿ, ಬೆಂಗಳೂರು ಇವರ ಸಹಯೋಗದಲ್ಲಿ ‘ಸಂಸ್ಕೃತ ಭಾಷೆ-ಸಾಹಿತ್ಯಗಳಿಗೆ ಕರ್ನಾಟಕದ ರಾಜಮನೆತನಗಳ ಕೊಡುಗೆ’ ಎಂಬ ವಿಷಯದಲ್ಲಿ ರಾಜ್ಯಮಟ್ಟದ ವಿಚಾರಗೋಷ್ಠಿಯು ಮೇ ೨೬, ೨೭ರಂದು ಬೆಂಗಳೂರಿನ ಜಯನಗರದಲ್ಲಿ ಶ್ರೀ ಜಯರಾಮ ಸೇವಾಮಂಡಲಿಯ ಸಭಾಂಗಣದಲ್ಲಿ ನಡೆಯಿತು.

ಪ್ರಖ್ಯಾತ ಕನ್ನಡ ವಿದ್ವಾಂಸರಾದ ನಾಡೋಜ ಪ್ರೊ.ಜಿ ವೆಂಕಟಸುಬ್ಬಯ್ಯನವರು ವಿಚಾರಗೋಷ್ಠಿಯನ್ನು ಉದ್ಘಾಟಿಸಿದರು. ಶ್ರೀಮತಿ ಎಸ್.ಆರ್.ಲೀಲಾ (ವಿಧಾನಪರಿಷತ್ ಸದಸ್ಯರು, ಕರ್ನಾಟಕ ಸರ್ಕಾರ) ಆಶಯಭಾಷಣ ಮಾಡಿದರು. ವಿಚಾರಗೋಷ್ಠಿಯಲ್ಲಿ ಈ ಕೆಳಗಿನ ವಿದ್ವಾಂಸರು ವಿಚಾರಪ್ರಸ್ತುತಿ ಮಾಡಿದರು.

ಗೋಷ್ಠಿ

ಭಾಷಣಕಾರರು

ವಿಷಯ

ಗೋಷ್ಠಿ ೧

ಅಧ್ಯಕ್ಷತೆ – ಡಾ. ದೇವರಕೊಂಡಾರೆಡ್ಡಿ

ಡಾ. ಎಚ್ ವಿ ನಾಗರಾಜರಾವ್ ಮೈಸೂರು ಅರಸರ ಕೊಡುಗೆ
ಡಾ. ಎಂ ಲೀಲಾವತಿ ಹೊಯ್ಸಳ ಅರಸರ ಕೊಡುಗೆ
ಕೆಳದಿ ವೆಂಕಟೇಶ ಜೋಯಿಸ್ ಕೆಳದಿ ಅರಸರ ಕೊಡುಗೆ
ಗೋಷ್ಠಿ ೨

ಅಧ್ಯಕ್ಷತೆ – ಕೆಳದಿ ವೆಂಕಟೇಶ ಜೋಯಿಸ್

ಡಾ. ಲಕ್ಷ್ಮಿಕಾಂತ ವಿ ಮೊಹರೆ ಸುರಪುರ ಸಂಸ್ಥಾನದ ಕೊಡುಗೆ
ಡಾ. ಭಾರತಿ ರಾಷ್ಟ್ರಕೂಟರು- ಗಂಗರ ಕೊಡುಗೆ
ಡಾ. ಕೆ ಟಿ ಸುದರ್ಶನ್ ವಿಜಯನಗರ ಅರಸರ ಕೊಡುಗೆ
ಗೋಷ್ಠಿ ೩

ಅಧ್ಯಕ್ಷತೆ – ಡಾ. ವರಖೇಡಿ ಶ್ರೀನಿವಾಸ

ಡಾ. ಪಿ ವಿ ಕೃಷ್ಣಮೂರ್ತಿ ಕದಂಬ ಅರಸರ ಶಾಸನಗಳು
ಡಾ. ಎಸ್ ರಂಗನಾಥ್ ಶ್ರೀತತ್ತ್ವನಿಧಿ – ಒಂದು ವಿಮರ್ಶೆ
ಡಾ. ವೈ ಎಸ್ ಗಾಯತ್ರಿ ಹೊಯ್ಸಳ ಕಲೆ-ವಾಸ್ತುಶಿಲ್ಪಪತ್ರಿಕಾ ವರದಿಗಳು

ಉದಯವಾಣಿ ಪತ್ರಿಕೆಯಲ್ಲಿನ ಸುದ್ದಿ

ವಿಜಯವಾಣಿ ಪತ್ರಿಕೆಯಲ್ಲಿನ ಸುದ್ದಿ

ಹೊಸದಿಗ೦ತ ಪತ್ರಿಕೆಯಲ್ಲಿನ ಸುದ್ದಿ

Comments are closed.