ಎಂ.ಫಿಲ್ (ವಿಶಿಷ್ಟಾಚಾರ್ಯ)


ವಿವರಗಳು


(ಎಂ.ಫಿಲ್ ೨೦೧೫-೧೬) ಕೋರ್ಸ್ ಗೆ ಆಯ್ಕೆಯಾದ ಅಭ್ಯರ್ಥಿಗಳು (ಎರಡನೆಯ ಪಟ್ಟಿ)

೨೦೧೫-೧೬ ಸಾಲಿನಲ್ಲಿ ಪಿಎಚ್ ಡಿ ಮತ್ತು ಎಂಫಿಲ್ ಗೆ ಆಯ್ಕೆಯಾದ ಅಭ್ಯರ್ಥಿಗಳ ಪಟ್ಪಿ (ಮೊದಲ ಪಟ್ಟಿ)

ಎಂ.ಫಿಲ್ ಅಧಿಸೂಚನೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪಿಎಚ್.ಡಿ ಹಾಗೂ ಎಂ.ಫಿಲ್ ಪ್ರವೇಶ ಪರೀಕ್ಷೆಯ ಪಠ್ಯಕ್ರಮವನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಎಂಫಿಲ್ (ವಿಶಿಷ್ಟಾಚಾರ್ಯ) ಕಾರ್ಯಕ್ರಮದ ವಿವರಣಪುಸ್ತಿಕೆಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾರ್ಯಕ್ರಮದ ಅವಧಿ – ೧ ವರ್ಷ

ಎಂಫಿಲ್ ಕಾರ್ಯಕ್ರಮವು ಪ್ರತಿವರ್ಷ ಜುಲೈ ತಿಂಗಳಿನಿಂದ ಆರಂಭವಾಗಿ ಮುಂದಿನ ವರ್ಷದ ಜೂನ್ ತಿಂಗಳ ಕೊನೆಯವರೆಗೆ ಇರುತ್ತದೆ. ಈ ಅವಧಿಯಲ್ಲಿ ಆರು ತಿಂಗಳು ಶೈಕ್ಷಣಿಕ ಕಾರ್ಯಕ್ರಮ. ಇದರಲ್ಲಿ ಸಂಶೋಧನಾಪದ್ಧತಿಯ ಬಗೆಗೆ ಹಾಗೂ ಎಂ.ಫಿಲ್ ಪ್ರೌಢಪ್ರಬಂಧದ ವಿಷಯದ ಬಗೆಗೆ ಬೋಧನೆ ಮತ್ತು ಅಧ್ಯಯನ. ಅನಂತರದ ಆರು ತಿಂಗಳು ಸಂಶೋಧನ ವಿಷಯದ ಮೇಲೆ ಪ್ರಬಂಧವನ್ನು ಸಿದ್ಧಗೊಳಿಸುವುದು. ಪ್ರೌಢಪ್ರಬಂಧವು ಸಂಸ್ಕೃತದಲ್ಲಿಯೇ ಇರಬೇಕು. ಇದನ್ನು ದ್ವಿತೀಯಹಂತದ ಕೊನೆಯಲ್ಲಿ ವಿಶ್ವವಿದ್ಯಾಲಯಕ್ಕೆ ಸಮರ್ಪಿಸಬೇಕು. ವಿಶ್ವವಿದ್ಯಾಲಯವು ಪ್ರಬಂಧದ ಮೌಲ್ಯಮಾಪನದ ಅನಂತರ ಮೌಖಿಕಪರೀಕ್ಷೆಯನ್ನು ನಡೆಸುವುದು.

ಕಾರ್ಯಕ್ರಮದ ಅವಧಿ

ಎಂ.ಫಿಲ್ (ವಿಶಿಷ್ಟಾಚಾರ್ಯ) ಭಾಗ

ಪತ್ರಿಕೆ

ಗರಿಷ್ಠ ಅಂಕಗಳು

ಲಿಖಿತಪರೀಕ್ಷೆ

ಆಂತರಿಕ ಮೌಲ್ಯಮಾಪನ

ಪರೀಕ್ಷಾ ಅವಧಿ

ಮೊದಲ ಆರು ತಿಂಗಳು

ಭಾಗ-೧

ಪತ್ರಿಕೆ ೧
ಸಾಮಾನ್ಯ: ಸಂಶೋಧನಪದ್ಧತಿ

೧೦೦

೮೦

೨೦

೩ ಗಂಟೆ

ಪತ್ರಿಕೆ ೨
ವಿಶೇಷ: ಸಂಶೋಧನವಿಷಯ

೧೦೦

೮೦

೨೦

೩ ಗಂಟೆ

ಎರಡನೆ ಆರು ತಿಂಗಳು

ಭಾಗ-೨

ಸಂಶೋಧನಪ್ರಬಂಧ

ಮೌಖಿಕಪರೀಕ್ಷೆ

೧೫೦

೫೦

-

-

-

ಒಟ್ಟು

೪೦೦

 

ಪ್ರವೇಶಾರ್ಹತೆ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ / ಮಾನ್ಯತೆ ಪಡೆದ ಇತರ ಸಂಸ್ಕೃತ ವಿಶ್ವವಿದ್ಯಾಲಯಗಳ / ಇತರ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ (ಸಂಸ್ಕೃತ) ಪದವಿ ಪರೀಕ್ಷೆಯಲ್ಲಿ ಕನಿಷ್ಷ್ಠ ಶೇ ೫೫ ಅಂಕಗಳನ್ನು ಪಡೆದಿರಬೇಕು. (ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ ೧ಕ್ಕೆ ಸೇರಿದ ಅಭ್ಯರ್ಥಿಗಳು ಶೇ ೫೦ ಅಂಕಗಳನ್ನು ಪಡೆದಿರಬೇಕು).

ಯುಜಿಸಿ/ಎನ್‌ಇಟಿ/ಎಸ್‌ಎಲ್‌ಇಟಿ/ಪ್ರವೇಶಪರೀಕ್ಷೆ ತೇರ್ಗಡೆ ಹೊಂದಿದ ಅಭ್ಯರ್ಥಿಗಳನ್ನು ಬಿಟ್ಟು ಮಿಕ್ಕವರು ವಿಶ್ವವಿದ್ಯಾಲಯವು ನಡೆಸುವ ಪ್ರವೇಶಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

 

ಮಾರ್ಗದರ್ಶಕರು

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದ ಮಾರ್ಗದರ್ಶಕರು ಎಂ.ಫಿಲ್ (ವಿಶಿಷ್ಟಾಚಾರ್ಯ) ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬಹುದು. ಆ ಮಾನ್ಯತೆಗೆ ಅರ್ಹರಾದವರು –

೧. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಘಟಕ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿ.ಎಚ್.ಡಿ ಪಡೆದು ೩ ವರ್ಷ ಬೋಧನಾನುಭವ ಹೊಂದಿದ ಪ್ರಾಧ್ಯಾಪಕರು, ಸಹಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು.

೨. ಪಿ.ಎಚ್.ಡಿ ಪಡೆದು ಕನಿಷ್ಠ ೩ ವರ್ಷ ಬೋಧನಾನುಭವ ಹೊಂದಿದ ಪದವಿ ಕಾಲೇಜುಗಳ ಸಂಸ್ಕೃತ ಸಹಾಯಕ ಪ್ರಾಧ್ಯಾಪಕರು.

೩. ಕರ್ನಾಟಕದ ಇತರ ವಿಶ್ವವಿದ್ಯಾಲಯಗಳ ಸಂಸ್ಕೃತ ವಿಭಾಗದ ಪಿ.ಎಚ್.ಡಿ ಪಡೆದು ೩ ವರ್ಷ ಬೋಧನಾನುಭವ ಹೊಂದಿದ ಪ್ರಾಧ್ಯಾಪಕರು, ಸಹಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು.

೪. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಸಂಸ್ಕೃತ ಕ್ಷೇತ್ರದಲ್ಲಿ ಪ್ರಗತ ಸಂಶೋಧನೆಗೆ ಮಾನ್ಯತೆ ಪಡೆದ ಸಂಸ್ಥೆ/ಕೇಂದ್ರಗಳ ಮೇಲ್ಕಂಡ ರೀತಿಯಲ್ಲಿ ವಿದ್ಯಾರ್ಹತೆ ಮತ್ತು ಅನುಭವವುಳ್ಳ ನಿರ್ದೇಶಕರು/ಉಪನಿರ್ದೇಶಕರು/ಸಂಶೋಧಕರು ಮುಂತಾದವರು.

ವೇಳಾಪಟ್ಟಿ

ಎಂ.ಫಿಲ್ (ವಿಶಿಷ್ಟಾಚಾರ್ಯ) ಪ್ರವೇಶ ಪ್ರಕ್ರಿಯೆಯ ವೇಳಾಪಟ್ಟಿ

ಕ್ರ.ಸಂ

ವಿವರ

ಅವಧಿ/ದಿನಾಂಕ

ಅಧ್ಯಯನಾಂಗದಿಂದ ಆವೇದನ ಪತ್ರ ನೀಡಿಕೆ ಜೂನ್ ೧೮, ೨೦೧೨
ಭರ್ತಿ ಮಾಡಿದ ಆವೇದನ ಪತ್ರ ಸ್ವೀಕಾರ ಜೂನ್ ೧೮, ೨೦೧೨
ಪ್ರವೇಶ ಪರೀಕ್ಷೆ ಬರೆಯಲು ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪ್ರವೇಶಪರೀಕ್ಷೆ ಜೂನ್ ೨೫, ೨೦೧೨, 9AM
ಮೌಖಿಕಪರೀಕ್ಷೆ ಜೂನ್ ೨೫, ೨೦೧೨, 2.30PM
ಫಲಿತಾಂಶ (ಕೋರ್ಸ್‌ಗೆ ಆಯ್ಕೆಯಾದವರ ಅಂತಿಮ ಪಟ್ಟಿಪ್ರಕಟಣೆ) ಜೂನ್ ೩೦, ೨೦೧೨
ನೋಂದಣಿ ಜುಲೈ ೦೯, ೨೦೧೨
ದ್ವಿತೀಯ ಪಟ್ಟಿ ಪ್ರಕಟಣೆ ಜುಲೈ ೧೨, ೨೦೧೨
ತರಗತಿ ಪ್ರಾರಂಭ ಜುಲೈ ೧೬, ೨೦೧೨
೧೦ ವಾರ್ಷಿಕ ಪರೀಕ್ಷೆ ಜನವರಿ ೨೦೧೩
೧೧ ಪ್ರಬಂಧಮಂಡನೆ ಜೂನ್ ೨೦೧೩

 

ಶುಲ್ಕವಿವರ


ಕ್ರ.ಸಂ

ಶುಲ್ಕ ವಿವರ

ಮೊತ್ತ (ರೂ)

ಆವೇದನಪತ್ರ ಶುಲ್ಕ ೩೦೦/-
ನೋಂದಣಿ ಶುಲ್ಕ ೫೦೦/-
ಬೋಧನಾಶುಲ್ಕ ೧೫೦೦/-
ಪರೀಕ್ಷಾಶುಲ್ಕ ೧೦೦೦/-
ಘಟಿಕೋತ್ಸವದ ಪ್ರಮಾಣಪತ್ರ (ಕನ್ನಡ ಮತ್ತು ಇಂಗ್ಲಿಷ್) ೫೦೦/-
ಗ್ರಂಥಾಲಯ ಶುಲ್ಕ ೨೫೦/-
ಮರುಪರೀಕ್ಷೆ ಶುಲ್ಕ ಪ್ರತಿ ಪತ್ರಿಕೆಗೆ ೫೦೦/-
ಚಾಲೆಂಜ್ ಮೌಲ್ಯಮಾಪನ ಶುಲ್ಕ ನಾಲ್ಕು ಪತ್ರಿಕೆಗಳಿಗೆ

ಒಂದು ಪತ್ರಿಕೆಗೆ

೪೦೦೦/-

೫೦೦/-

ನಿಬಂಧ ಮರುಸಲ್ಲಿಕೆಗೆ ಶುಲ್ಕ ೧೦೦೦/-

 

ಆವೇದನ ಪತ್ರ ಸಲ್ಲಿಕೆ


ಆವೇದನ ಪತ್ರ ಪಡೆಯುವಿಕೆ ಮತ್ತು ಸಲ್ಲಿಕೆ ವಿವರ

ಎಂ.ಫಿಲ್ ಆವೇದನ ಪತ್ರ ಶುಲ್ಕ ಸಾಮಾನ್ಯ ವರ್ಗ ರೂ. ೩೦೦/- , ಪ.ಜಾ, ಪ.ವರ್ಗ, ಪ್ರವರ್ಗ-೧ ಅಭ್ಯರ್ಥಿಗಳಿಗೆ ರೂ.೧೫೦/-ಗಳನ್ನುಹಣಕಾಸು ಅಧಿಕಾರಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಚಾಮರಾಜಪೇಟೆ, ಬೆಂಗಳೂರು-೫೬೦೦೧೮ ಇವರ ಹೆಸರಿಗೆ ಡಿ.ಡಿ ಪಾವತಿಸಿ ಆವೇದನಪತ್ರಗಳನ್ನು ಪಡೆಯಬಹುದಾಗಿದೆ.

ಆವೇದನ ಪತ್ರವನ್ನು ನೇರವಾಗಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಹಣಕಾಸು ವಿಭಾಗದಲ್ಲಿ ಶುಲ್ಕ ಪಾವತಿಸಿ  ಜೂನ್ ೧೮ರೊಳಗಾಗಿ ಅಧ್ಯಯನಾಂಗದಿಂದ ಪಡೆಯಬಹುದಾಗಿದೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಿಂದಲೂ ಆವೇದನ ಪತ್ರವನ್ನು ಡೌನ್‌ಲೋಡ್ ಮಾಡಿ ನಿಗದಿತ ಶುಲ್ಕದ ಡಿ.ಡಿಯೊಂದಿಗೆ ಜೂನ್ ೧೮ರೊಳಗೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ತಲುಪಿಸಬೇಕು.

ಎಂ.ಫಿಲ್ ಆವೇದನಪತ್ರವನ್ನು ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಭರ್ತಿ ಮಾಡಿದ ಆವೇದನ ಪತ್ರಗಳನ್ನು ಕುಲಸಚಿವರು/ನಿರ್ದೇಶಕರು, ಅಧ್ಯಯನಾಂಗ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಚಾಮರಾಜಪೇಟೆ, ಬೆಂಗಳೂರು – ೫೬೦೦೧೮ ಇವರಿಗೆ ಅಭ್ಯರ್ಥಿಗಳು ನೇರವಾಗಿ ಅಥವಾ ಅಂಚೆ ಮೂಲಕ ಜೂನ್ ೧೮ರೊಳಗೆ ತಲುಪುವಂತೆ ಸಲ್ಲಿಸುವುದು. ನಂತರ ಬಂದ ಆವೇದನ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ.

ಲಭ್ಯವಿರುವ ಸ್ಥಾನಗಳು


ಎಂ.ಫಿಲ್ (ವಿಶಿಷ್ಟಾಚಾರ್ಯ) ತರಗತಿಗೆ ಲಭ್ಯವಿರುವ ಸ್ಥಾನಗಳ ಸಂಖ್ಯೆ

ನಿಕಾಯಗಳು/ವಿಭಾಗಗಳು ಲಭ್ಯವಿರುವ ಸ್ಥಾನಗಳು
ವೇದಾಧ್ಯಯನಗಳ ನಿಕಾಯ
ಭಾಷಾನಿಕಾಯ
ಶಾಸ್ತ್ರನಿಕಾಯ
ವೇದಾಂತನಿಕಾಯ
ಒಟ್ಟು ೩೦

ಸೂಚನೆ:

  1. ಸರ್ಕಾರದ / ವಿಶ್ವವಿದ್ಯಾಲಯದ ನಿಯಮಾನುಸಾರ ಮೀಸಲಾತಿಯನ್ನು ಪಾಲಿಸಲಾಗುತ್ತದೆ.
  2. ಒಂದು ನಿಕಾಯದಿಂದ ಇನ್ನೊಂದು ನಿಕಾಯಕ್ಕೆ ಸ್ಥಾನಗಳನ್ನು ವರ್ಗಾಯಿಸುವ ಹಕ್ಕು ವಿಶ್ವವಿದ್ಯಾಲಯಕ್ಕೆ ಇರುತ್ತದೆ.

ಪ್ರವೇಶಪರೀಕ್ಷೆ


ಪ್ರವೇಶಪರೀಕ್ಷೆ

  1. ಇದು ಲಿಖಿತಪರೀಕ್ಷೆಯಾಗಿರುತ್ತದೆ
  2. ಪರೀಕ್ಷೆ ಪೂರ್ಣವಾಗಿ ಸಂಸ್ಕೃತಭಾಷಾ ಮಾಧ್ಯಮದಲ್ಲಿ ಇರುತ್ತದೆ.
  3. ಈ ಪರೀಕ್ಷೆಯನ್ನು ಬೆಂಗಳೂರು ಕೇಂದ್ರದಲ್ಲಿ ಮಾತ್ರ ನಡೆಸಲಾಗುವುದು.
  4. ಪರೀಕ್ಷೆ ನೂರು ಅಂಕಗಳಿಗೆ ಇರುತ್ತದೆ.

೨೦ ಅಂಕಗಳು

ಭಾಗ ೧

ಭಾಷಾವ್ಯುತ್ಪತ್ತಿ (ಏಕಾಂಕಪ್ರಶ್ನೆಗಳು)

೨೦ ಅಂಕಗಳು

ಸಾಮಾನ್ಯ ದರ್ಶನ/ಶಾಸ್ತ್ರ/ವೇದ ಇತ್ಯಾದಿ ವಿಷಯ (ಏಕಾಂಕ ಪ್ರಶ್ನೆಗಳು)

೩೦ ಅಂಕಗಳು

ಭಾಗ ೨

ಸಾಮಾನ್ಯವಿಷಯದಲ್ಲಿ ಟಿಪ್ಪಣಿ/ಪ್ರಬಂಧ

೨೦ ಅಂಕಗಳು

ಅಧ್ಯಯನಕ್ಷೇತ್ರಕ್ಕೆ ಸಂಬಂಧಿಸಿದ ವಿಷಯದಲ್ಲಿ ಪ್ರಬಂಧ

೩೦ ಅಂಕಗಳು

ಅಧ್ಯಯನಕೇಂದ್ರಗಳು


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನಿತ ಸ್ನಾತಕೋತ್ತರ ಅಧ್ಯಯನಕೇಂದ್ರಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

 

ಮಾನಿತ ಸಂಶೋಧನಾ ಕೇಂದ್ರಗಳು

೧. ವಿದ್ಯಾಧೀಶ ಸ್ನಾತಕೋತ್ತರ ಸಂಸ್ಕೃತ ಶೋಧಕೇಂದ್ರ, ದ್ವೈತವೇದಾಂತ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನ, ಉತ್ತರಾದಿಮಠ ರಸ್ತೆ, ಬಸವನಗುಡಿ, ಬೆಂಗಳೂರು – ೫೬೦೦೦೪
೨. ತತ್ತ್ವಸಂಶೋಧನ ಸಂಸತ್, ರಥಬೀದಿ, ಉಡುಪಿ

Comments are closed.