ಶೋಧಪತ್ರಿಕೆ


ಶೋಧಪತ್ರಿಕೆಯ ಬಗ್ಗೆ


ಕರ್ನಾಟಕಸಂಸ್ಕೃತವಿಶ್ವವಿದ್ಯಾಲಯದಲ್ಲಿ ಪ್ರಧಾನವಾಗಿ ೪ ಅಂಗಗಳಿವೆ – ಬೋಧನಾಂಗ, ಸಂಶೋಧನಾಂಗ, ಪ್ರಕಾಶನಾಂಗ, ಮತ್ತು ಪ್ರಶಾಸನಾಂಗ. ಪ್ರಾಚೀನ ಜ್ಞಾನವಿಜ್ಞಾನಗಳ ಸಮನ್ವಯವನ್ನು ಸಾಧಿಸುವುದು ನಮ್ಮ ಪ್ರಧಾನ ಉದ್ದೇಶ. ಎರಡರ ಸಮನ್ವಯದಿಂದಲೇ ಸಂಸ್ಕೃತದ ಅಭಿವೃದ್ಧಿಯನ್ನು ಸಾಧಿಸಬೇಕು.

ಈ ಭೂಮಿಕೆಯನ್ನು ಆಧರಿಸಿ ‘ಕರ್ನಾಟಕಸಂಸ್ಕೃತಾಧ್ಯಯನ’ ಎಂಬ ಅರ್ಧವಾರ್ಷಿಕ ಶೋಧಪತ್ರಿಕೆ ಆರಂಭವಾಯಿತು. ಕರ್ನಾಟಕದ ಶೋಧಕರ ಮತ್ತು ವಿದ್ವಾಂಸರ ಶೋಧಲೇಖನಗಳ ಪ್ರಕಾಶನಕ್ಕಾಗಿ ಯಾವ ಶೋಧಪತ್ರಿಕೆಯೂ ಇರಲಿಲ್ಲ. ಈ ನ್ಯೂನತೆಯನ್ನು ಪೂರ್ತಿಮಾಡಲು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಿಂದ ಈ ಶೋಧಪತ್ರಿಕೆಯ ಪ್ರಕಾಶಿತವಾಗುತ್ತದೆ

ಚಂದಾಪಾವತಿ ವಿವರಗಳು:


ವಾರ್ಷಿಕ ಚಂದಾ – ರೂ ೩೦೦/-
ವಾರ್ಷಿಕ ಚಂದಾ (ವಿದೇಶಕ್ಕೆ) – ೨೫/- ಯು.ಎಸ್ ಡಾಲರ್ (ಕಳುಹಿಸುವ ಖರ್ಚನ್ನು ಸೇರಿಸಿ)

ಚಂದಾ ಪಾವತಿಯನ್ನು Demand Draft/Banker’s Cheque/Money Order ಮೂಲಕ ಈ ವಿಳಾಸಕ್ಕೆ ಮಾಡಬಹುದು – The Finance Officer, Karnataka Samskrit University, Pampa Mahakavi Road, Chamarajapet, Bangalore – 560018, Karnataka, India.

ಲೇಖಕರಿಗೆ ಸೂಚನೆಗಳು :ದಯಮಾಡಿ ನಿಮ್ಮ ವಿಚಾರಗಳನ್ನು ೫೦೦೦-೮೦೦೦ ಶಬ್ದಗಳಲ್ಲಿ (ಪ್ರಬಂಧ, ಲೇಖನ, ಶೋಧಲೇಖನ), ೪೦೦೦ ಶಬ್ದಗಳಲ್ಲಿ ( ಪುಸ್ತಕ ವಿಮರ್ಶೆ, ಪ್ರತ್ಯುತ್ತರ, ವಿಮರ್ಶಾತ್ಮಕ ಟಿಪ್ಪಟಿ) ಕಾಯಂಪ್ರತಿ (hard copy) ಮತ್ತು ಗಣಕಯಂತ್ರ ಪ್ರತಿಯೊಂದಿಗೆ (Soft copy) ಕಳುಹಿಸಿ. ಗಣಕಯಂತ್ರಪ್ರತಿಯನ್ನು ಎಮ್,ಎಸ್ ವರ್ಡ್ (೧೯೯೭-೨೦೦೩ ಅಥವಾ ೨೦೦೭) ರೂಪದಲ್ಲಿ ವಿಸಿಡಿ/ಫ಼್ಲಾಫಿ/ಇಮೈಲ್ ಮೂಲಕ ಕಳುಹಿಸಿ. A4 ಅಳತೆಯನ್ನು ಹೊಂದಿರುವ ಕಾಯಂಪ್ರತಿಯಲ್ಲಿ ಪಂಕ್ತಿಗಳ ನಡುವೆ ೧.೫ರಷ್ಟು ಅವಕಾಶದೊಂದಿಗೆ ಎರಡೂ ಕಡೆ ಮಾರ್ಜಿನ್-ಗಾಗಿ ಯಥೇಚ್ಛ ಅವಕಾಶ ಇರಬೇಕು. ೧೦೦ ಶಬ್ದಗಳ ಸಾರಾಂಶವನ್ನು ಕೂಡಾ ಲೇಖನದೊಂದಿಗೆ ಕಳುಹಿಸಬೇಕು. ಲೇಖನವನ್ನು ನಿಮ್ಮ ಪರಿಪೂರ್ಣ ವಿಳಾಸದೊಂದಿಗೆ ಈ ವಿಳಾಸಕ್ಕೆ ಕಳುಹಿಸಿ –
The Editor, Karnataka Samskrit University, Pampa mahakavi road, Chamarajapete, Bangalore 560018, Karnataka, India. Email: karnatakasanskrituniversity@gmail.com
ಕಳುಹಿಸಿದ ಎಲ್ಲಾ ಲೇಖನಗಳೂ ಸಂಪಾದಕಮಂಡಳಿಯಿಂದ ಪರಿಶೀಲಿಸಲ್ಪಡುತ್ತವೆ. ಸಂಪಾದಕಮಂಡಳಿ ತಜ್ಞರ ಸಮಿತಿಗೆ ಲೇಖನದ ವಿಮರ್ಶೆಗಾಗಿ ಸೂಚಿಸಬಹುದು. ಪ್ರಕಟಿಸುವ ನಿರ್ಣಯ, ಪರಿಷ್ಕರಿಸಲು ಸೂಚನೆ, ಪುನಃ ಕಳುಹಿಸಲು ಸೂಚನೆ ಮುಂತಾದ ಸೂಚನೆಗಳೆಲ್ಲವೂ ಸಂಪಾದಕ ಮಂಡಳಿಯ ಅಧೀನವಾಗಿರುತ್ತವೆ. ಎಲ್ಲಿಯವರೆಗೆ ಸಂಪಾದಕಮಂಡಳಿಯು ನಿರ್ಣಯವನ್ನು ತಿಳಿಸುವುದಿಲ್ಲವೋ, ಅಲ್ಲಿಯವರೆಗೆ ಬೇರೆ ಶೋಧಪತ್ರಿಕೆಯಲ್ಲಿ ಪ್ರಕಟಿಸಲು ಈ ಲೇಖನಗಳನ್ನು ಲೇಖಕರು ಕಳುಹಿಸಬಾರದು. ಪ್ರಕಾಶಿಸಿದ ವಿಷಯಗಳ ಸಂಪೂರ್ಣ ಸ್ವಾಮ್ಯ ಕರ್ನಾಟಕಸಂಸ್ಕೃತವಿಶ್ವವಿದ್ಯಾಲಯದ್ದೇ ಆಗಿರುತ್ತದೆ.

ಪ್ರಕಾಶಿತ ಲೇಖನಗಳ ಮುದ್ರಣಕ್ಕೆ ವಿದ್ಯುನ್ಮಾಧ್ಯಮಗಳ ಮೂಲಕ ಭಾಗಶಃ ಅಥವಾ ಪೂರ್ಣವಾಗಿ ಪುನಃ ಪ್ರಕಾಶಿಸಲು ಪ್ರಕಾಶಕರ ಪೂರ್ವಾನುಮತಿ ಪಡೆದುಕೊಳ್ಳಬೇಕು. ತಮ್ಮ ಲೇಖನಗಳಲ್ಲಿ ಉಲ್ಲೇಖಿಸಿರುವ ಅಂಶಗಳ ಮೂಲದ ಮತ್ತು ಮೂಲಲೇಖಕರ ಉಲ್ಲೇಖವನ್ನು ಲೇಖಕರೇ ನೀಡಬೇಕು. ಈ ವಿಷಯದಲ್ಲಿ ಲೇಖಕರ ದೋಷ ಅಥವಾ ನಿಯಮವಿರೋಧವಿದ್ದಲ್ಲಿ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಪಾದಕರು, ಸಂಪಾದಕ ಮಂಡಳಿ ಅಥವಾ ಪ್ರಕಾಶಕರು ಉತ್ತರದಾಯಿಗಳಾಗುವುದಿಲ್ಲ.
ಯಾರು ತಮ್ಮ ಪುಸ್ತಕದ ವಿಮರ್ಶೆಯನ್ನು ಪಡೆಯಲು ಇಚ್ಚಿಸುತ್ತಾರೋ ಅವರು, ಪತ್ರದೊಂದಿಗೆ ಪುಸ್ತಕದ ಎರಡು ಪ್ರತಿಯನ್ನು ಸಂಪಾದಕರಿಗೆ ಕಳುಹಿಸಬೇಕು.

ಲೇಖನ ಕ್ರಮ –
1.ಪ್ರತಿ ಹಾಳೆಯ ಕೆಳಗೆ ಟಿಪ್ಪಣಿಯನ್ನು ಬರೆಯುವ ಬದಲು, ಲೇಖನದ ಕೊನೆಗೆ ಟಿಪ್ಪಣಿಯನ್ನು ಬರೆಯಬಹುದು. ಕೃತಜ್ಞತೆಯನ್ನು ಸೂಚಿಸುವದಕ್ಕಿಂತ ಮುಂಚೆ ಸಂಖ್ಯೆಯೊಂದಿಗೆ ಟಿಪ್ಪಣಿಗಳನ್ನು ಉಲ್ಲೇಖಿಸಬೇಕು.
2.ಗ್ರಂಥೋಲ್ಲೇಖವನ್ನು ಅಕಾರಾದಿಕ್ರಮದಿಂದ ಲೇಖಕರ ಹೆಸರಿನಿಂದ ಆರಂಭಿಸಿ ವರ್ಷ, ಪುಸ್ತಕದ ಹೆಸರು, ಪ್ರಕಾಶಕರ ಹೆಸರು, ಸ್ಥಳ, ಪೇಜಿನ ಸಂಖ್ಯೆ ಎಂಬ ಕ್ರಮದಲ್ಲಿ ನಮೂದಿಸಬೇಕು.
ಉದಾಹರಣೆ : Sarma, D.S, 1989, The Upanishads: An Anthology, Bharatiya Vidya Bhavan, Bombay, p.18.
3.ಲೇಖನಸಂಗ್ರಹದ ಆಯ್ದ ಲೇಖನವನ್ನು ತೆಗೆದುಕೊಳ್ಳುವುದಾದಲ್ಲಿ ಈ ಕೆಳಕಂಡ ಕ್ರಮವನ್ನು ಅನುಸರಿಸಿ –
Banerjee S.C, 2001, ‘The Great Epics in the cultural heritage of India’, Vol V, Languages and Literatures, Ed: Suniti Kumar Chatterjee, The Ramakrishna Mission Institute of Culture, Kolkata, pp 90-98.
4.ಲೇಖನದಲ್ಲಿ ಬಳಸಿದ ಸಂಸ್ಕೃತ ಶಬ್ದಗಳಿಗೆ ಡಯಾಕ್ರಿಟಿಕಲ್ ಸಂಕೇತವನ್ನು ಕೊಡುವುದು ಲೇಖಕರ ಜವಾಬ್ದಾರಿ. ಡಯಾಕ್ರಿಟಿಕಲ್ ಸಂಕೇತಕ್ಕಾಗಿ ಬಳಸಿದ ಫ಼ೊಂಟ್-ವಿನ್ಯಾಸವನ್ನು ಕೂಡಾ ತಿಳಿಸಬೇಕು.

ಹಿ೦ದಿನ ಪ್ರತಿಗಳ ವಿವರ


ಗ್ರಂಥದ ವಿವರಗಳು :
cover page

ಸಂಪುಟ ೧,ಸ೦ಖ್ಯೆ ೧: – ಜನವರಿ-ಜುಲೈ ೨೦೧೧

ಮಖ್ಯ ಸಂಪಾದಕರು : ಪ್ರೋ. ಮಲ್ಲೇಪುರಂ ಜಿ, ವೆಂಕಟೇಶ
ಕುಲಪತಿಗಳು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ
ಸಂಪಾದಕರು : ಪ್ರೋ. ಎಮ್.ಕೆ ಶ್ರೀಧರ
ಉಪನಿರ್ದೇಶಕರು,ಪ್ರಸಾರ೦ಗ,ಕರ್ನಾಟಕ ಸ೦ಸ್ಕೃತ ವಿಶ್ವವಿದ್ಯಾಲಯ,ಬೆ೦ಗಳೂರು-೧೮
ಸಂಪಾದಕಮಂಡಲಿಯ ಸದಸ್ಯರು : 1.ಡಾ. ಹೆಚ್. ವಿ ನಾಗರಾಜ ರಾವ್, ಪ್ರಸಿದ್ಧ ಸಂಸ್ಕೃತ ವಿದ್ವಾಂಸರು, ಮೈಸೂರು
2.ಡಾ. ಹೆಚ್. ಆರ್ ವಿಶ್ವಾಸ, ಸಂಸ್ಕೃತಭಾರತೀ, ಮಂಗಳೂರು
3.ಡಾ. ಮೈಕೇಲ್, ಸಂಸ್ಕೃತ ಪ್ರಾಧ್ಯಾಪಕರು, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ
4.ಡಾ. ರಾಮಚಂದ್ರ ಭಟ್ ಕೋಟೆಮನೆ, ಡೀನ್, ಎಸ್.ವ್ಯಾಸ , ಜಿಗಣಿ
5.ಡಾ. ಎ.ವಿ ನಾಗಸಂಪಿಗೆ, ನಿರ್ದೇಶಕರು, ಪೂರ್ಣಪ್ರಜ್ಞ ಸಂಶೋಧನಮಂದಿರ, ಬೆಂಗಳೂರು
6.ಡಾ. ಟಿ,ಎಸ್ ಸತ್ಯವತೀ, ಪ್ರಾಧ್ಯಾಪಿಕಾ, ಸಂಸ್ಕೃತವಿಭಾಗಾಧ್ಯಕ್ಷರು, ವಿದ್ಯಾವರ್ಧಕಸಂಘ ಪ್ರಥಮ ದರ್ಜೆ ಹೆಣ್ಣುಮಕ್ಕಳ ಕಾಲೇಜು, ಬಸವೇಶ್ವರನಗರ, ಬೆಂಗಳೂರು
ಪ್ರಕಾಶಕರು: ಕುಲಸಚಿವರು, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ
ಬೈಂಡಿಂಗ್ ಮಾದರಿ : ಪೇಪರ್ ಬ್ಯಾಕ್
ಪ್ರಕಾಶನ ವರ್ಷ: 2011
ಪೇಜುಗಳ ಸಂಖ್ಯೆ: 275


Comments are closed.