ಕುಲಪತಿಗಳ ಸಂದೇಶ

ಪ್ರೊ. ಕೆ .ಇ. ದೇವನಾಥನ್

ಕುಲಪತಿಗಳು

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಜಾಲತಾಣವು ಈಗ ನಿಮ್ಮ ಮುಂದಿದೆ. ಸಂಸ್ಕೃತ-ಸಂಸ್ಕೃತಿಗಳ ಸಾಮರಸ್ಯದ ಪ್ರತೀಕವಾದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಕರ್ನಾಟಕ ಸರ್ಕಾರದ ಬಹುಯತ್ನದ ಫಲವಾಗಿ ೨೦೧೦ರಲ್ಲಿ ರೂಪುಗೊಂಡಿತು. ಪ್ರಾಚೀನ ಜ್ಞಾನದೊಂದಿಗೆ ಆಧುನಿಕ ವಿಜ್ಞಾನ ತಂತ್ರಜ್ಞಾನವನ್ನು ಸಮ್ಮಿಲನಗೊಳಿಸುವುದು ಸಂಸ್ಕೃತ ವಿಶ್ವವಿದ್ಯಾಲಯದ ಉದ್ದೇಶವಾಗಿದೆ. ಸಂಸ್ಕೃತವನ್ನು ಕೇವಲ ಭಾಷೆಯಾಗಿ ಅವಲೋಕಿಸದೆಯೇ, ವೈಜ್ಞಾನಿಕ ತಾತ್ತ್ವಿಕ ದೃಷ್ಟಿಯಿಂದಲೂ ನಾವು ನೋಡಬೇಕಾಗಿ ಬೇರೆ ವಿಶ್ವವಿದ್ಯಾಲಯಗಳಲ್ಲಿ ಬೋಧನೆಗೆ ಹೆಚ್ಚು ಒತ್ತು ನೀಡಿರುತ್ತಾರೆ. ಆದರೆ, ನಮ್ಮಲ್ಲಿ ಸಂಶೋಧನೆಗೇ ಪರಮ ಪ್ರಾಧಾನ್ಯ. ಅದರ ಜೊತೆಗೆ ಬೋಧನೆ ಇದ್ದೇ ಇರುತ್ತದೆ. ಭಾರತೀಯ ಪರಂಪರೆಯ ಇತಿಹಾಸದ ಅಧ್ಯಯನವನ್ನು ಸಂಸ್ಕೃತದ ಮೂಲಕ ನಾವು ಮಾಡಬೇಕಿದೆ. ಕನ್ನಡ ಸಂಸ್ಕೃತಗಳ ಸಾಂಸ್ಕೃತಿಕ ದೀಪಗಳನ್ನು ಶೋಧಿಸಿ ಬೆಳಗಿಸಬೇಕಿದೆ. ಭಾರತದ ಆಧುನಿಕ ನಿರ್ವಹಣ ಶಾಸ್ತ್ರದ ದೃಷ್ಟಿಯಿಂದ ಸಂಸ್ಕೃತವು ಮುಂದಾಳುವಾಗಬೇಕಿದೆ. ಈ ದಿಸೆಯಲ್ಲಿ ಒಟ್ಟಿಗೆ ನಾವೆಲ್ಲರೂ ಶ್ರಮಿಸಬೇಕಿದೆ. ಕರ್ನಾಟಕದಲ್ಲಿರುವ ಎಲ್ಲಾ ಸಂಸ್ಕೃತ ವಿದ್ವಾಂಸರ ಮತ್ತು ಸಂಸ್ಕೃತ ಕನ್ನಡ ಉಭಯ ವಿದ್ವಾಂಸರ ಸಹಕಾರವನ್ನು ಆತ್ಮೀಯವಾಗಿಯೂ ಗೌರವಪೂರ್ವಕವಾಗಿಯೂ ನಾನು ಬಯಸುತ್ತೇನೆ.

Comments are closed.