ಸಂಸ್ಥಾಪನಾವಿಶೇಷೋಪನ್ಯಾಸಮಾಲಿಕೆ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಎರಡು ಪ್ರಧಾನ ಉದ್ದೇಶ್ಯಗಳು – ಸಂಸ್ಕೃತದ ನಾನಾ ಶಾಸ್ತ್ರಗಳಲ್ಲಿ ಉನ್ನತಾಧ್ಯಯನದ ವ್ಯವಸ್ಥಾಪನೆ, ಮತ್ತು ಸಂಶೋಧನೆ. ಇವುಗಳ ಜೊತೆಗೆ ಜನರಿಗೆ ಇದರಲ್ಲಿ ಹುದುಗಿರುವ ಜ್ಞಾನರಾಶಿಯ ಬಗೆಗೆ ಜಾಗೃತಿಯನ್ನು ಮೂಡಿಸುವ ಆಶಯದಿಂದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ‘ಸಂಸ್ಥಾಪನಾವಿಶೇಷೋಪನ್ಯಾಸಮಾಲಿಕೆ’ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ.

ಈ ಉಪನ್ಯಾಸಮಾಲಿಕೆಯ ಅಡಿಯಲ್ಲಿ ಅಂತಾರಾಷ್ಟ್ರಿಯ/ರಾಷ್ಟ್ರಿಯ ಸ್ತರದಲ್ಲಿ ಖ್ಯಾತನಾಮರಾದ ಸಂಸ್ಕೃತ ಶಾಸ್ತ್ರಗಳಲ್ಲಿ ಅಥವಾ ಸಂಬಂಧಿಸಿದ ಅಂತರವಿಷಯಕ ವ್ಯಾಸಂಗದಲ್ಲಿ ಸಾಧನೆಗೈದ ಹಿರಿಯ ವಿದ್ವಾಂಸರಿಗೆ ಮಾನ್ಯ ಕುಲಪತಿಗಳು ಆಹ್ವಾನವನ್ನು ನೀಡುತ್ತಾರೆ. ಇಂತಹ ಉಪನ್ಯಾಸಗಳನ್ನು ರಾಜ್ಯದ ವಿವಿಧ ಸ್ಥಳಗಳಲ್ಲಿರುವ ಸಂಸ್ಕೃತ ಕಾಲೇಜುಗಳ ಹಾಗು ಇತರ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಗುವುದು. ಉಪನ್ಯಾಸದ ವಿಷಯವನ್ನು ಪೂರ್ಣವಾಗಿ ಲೇಖನರೂಪದಲ್ಲಿ ನೀಡಬೇಕೆಂದು ಉಪನ್ಯಾಸಕರಲ್ಲಿ ಕೇಳಿಕೊಂಡು ಅದನ್ನು ಪಡೆದು ಸಣ್ಣ ಹೊತ್ತಿಗೆಯ ರೂಪದಲ್ಲಿ ಉಪನ್ಯಾಸಕ್ಕೆ ಮೊದಲೇ ಪ್ರಕಟಿಸಲಾಗುವುದು.

ಸಂಸ್ಥಾಪನಾವಿಶೇಷೋಪನ್ಯಾಸಮಾಲಿಕೆಯ ಮೊದಲನೆಯ ಉಪನ್ಯಾಸವು ಕರ್ನಾಟಕದ ಸುಪ್ರಸಿದ್ಧ ವಿದ್ವಾಂಸರಾದ ಪದ್ಮಶ್ರೀ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರಿಂದ ನೀಡಲ್ಪಟ್ಟಿತು. ‘ಭಾರತೀಯ ಮನಃಶಾಸ್ತ್ರದ ಮೂಲತತ್ತ್ವಗಳು’ ಎಂಬ ಈ ಉಪನ್ಯಾಸವು ಕಿರುಹೊತ್ತಿಗೆಯ ರೂಪದಲ್ಲಿ ವಿಶ್ವವಿದ್ಯಾಲಯದಿಂದ ಪ್ರಕಟಿಸಲ್ಪಟ್ಟಿದೆ.

ಎರಡನೆಯ ಉಪನ್ಯಾಸವು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದ ಕುಲಪತಿಗಳೂ, ವಿದ್ವಾಂಸರೂ ಆದ ಪ್ರೊ. ರಾಧಾವಲ್ಲಭ ತ್ರಿಪಾಠಿಯವರಿಂದ ನಾಟ್ಯಶಾಸ್ತ್ರಗೌರವಮ್ ಎಂಬ ವಿಷಯದ ಬಗೆಗೆ ನೀಡಲ್ಪಟ್ಟಿತು. ಅದೇ ದಿನ ಈ ಉಪನ್ಯಾಸವು ಹೊತ್ತಿಗೆಯ ರೂಪದಲ್ಲಿ ವಿಶ್ವವಿದ್ಯಾಲಯದ ಮೂಲಕ ಲೋಕಾರ್ಪಣಗೊಂಡಿತು

 

ಸಂಸ್ಥಾಪನಾವಿಶೇಷೋಪನ್ಯಾಸಮಾಲಿಕೆ -1

ಸಂಸ್ಥಾಪನಾವಿಶೇಷೋಪನ್ಯಾಸಮಾಲಿಕೆ -2

Comments are closed.